ಇಂದು ದಿನಾಂಕ:10:06:2022 ರ ರಾಜ್ಯಾದ್ಯಂತ ನಡೆದ VC ಯ ಪ್ರಮುಖ ಅಂಶಗಳು
▪️ರಾಜ್ಯಾದ್ಯಂತ ಅತಿಥಿ ಶಿಕ್ಷಕರಿಗೆ ಕಲಿಕಾಚೇತರಿಕೆ ತರಬೇತಿ
▪️ವಿದ್ಯಾರ್ಥಿಗಳಿಗೆ ಕಾರ್ಯ ಹಾಳೆಗಳು ಸರಬರಾಜು ಆಗುವ ವರೆಗೂ ಅಭ್ಯಾಸ ಹಾಳೆಗಳಲ್ಲಿ ಇರುವ ಕಲಿಕಾ ಫಲಗಳಿಗೆ ಪೂರಕವಾಗಿರುವ FLN ಚಟುವಟಿಕೆಗಳನ್ನು ಕಡ್ಡಾಯವಾಗಿ ಹಮ್ಮಿಕೊಳ್ಳುವುದು.
▪️ಕಲಿಕಾ ಚೇತರಿಕೆ ಕಾರ್ಯಕ್ರಮದ ಉದ್ದೇಶ ಮತ್ತು ಆಶಯಗಳನ್ನು ಪ್ರತಿಯೊಬ್ಬ ಪೋಷಕರಿಗೆ ಮಾಹಿತಿ ತಲುಪುವಂತೆ ಪೋಷಕರ ಸಭೆ ಎಸ್ ಡಿಎಂಸಿ ಸಭೆ ಸ್ಥಳೀಯ ಚುನಾಯಿತ ಪ್ರತಿನಿಧಿಗಳಿಗೆ ಸಭೆಯ ಮೂಲಕ ಮಾಹಿತಿಯನ್ನು ತಲುಪಿಸುವುದು.
▪️ಪ್ರತಿ ತರಗತಿಯ ಪ್ರತಿ ವಿದ್ಯಾರ್ಥಿಯಪ್ರತಿ ವಿಷಯದ ಎಫ್ ಎಲ್ ಎನ್ ಕಲಿಕಾ ಮಟ್ಟದ ಮಾಹಿತಿಯು ಶಿಕ್ಷಕರು ತಪ್ಪದೆ ಸಂಗ್ರಹಿಸಿಕೊಳ್ಳುವುದು.
▪️ ರಾಜ್ಯಾದ್ಯಂತ ವಿದ್ಯಾ ಪ್ರವೇಶಕ್ಕೆ ಸಂಬಂಧಪಟ್ಟ ಏಕರೂಪದ ವೇಳಾಪಟ್ಟಿಯನ್ನು ಅನುಸರಿಸುವುದು (DSERT)
▪️ ವಿದ್ಯಾ ಪ್ರವೇಶ ಮತ್ತು ಕಲಿಕಾ ಚೇತರಿಕೆ ಉಪಕ್ರಮಕ್ಕೆ ಸಂಬಂಧಪಟ್ಟಂತೆ DSERT page ನಲ್ಲಿ ನಿರಂತರವಾಗಿ ಪ್ರಕಟಿಸುವ ಸಂಪನ್ಮೂಲಗಳನ್ನು ಮಾದರಿಗಾಗಿ ಅಥವಾ ನಿರ್ದಿಷ್ಟವಾಗಿ ಬಳಸಿಕೊಳ್ಳಲು ಕಲ್ಪಿಸಿರುವ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು.
▪️ ಅತಿಮುಖ್ಯವಾಗಿ ದತ್ತು ಶಾಲೆಗಳ ಮಾಹಿತಿಯು ದತ್ತುಪಡೆದ ಅಧಿಕಾರಿಗಳಿಗೆ (CRP/BRP/ECO/BRC/DIET) ನಿರಂತರವಾಗಿ ತಲುಪಿಸುವುದು.
▪️ ಕಲಿಕಾ ಚೇತರಿಕೆಯ ಉಪಕ್ರಮದ ಯಶಸ್ವಿಗಾಗಿ ಶಿಕ್ಷಕರ ಕೈಪಿಡಿ ಮತ್ತು ಮಕ್ಕಳ ಕಲಿಕಾ ಹಾಳೆಗಳು ಸರಬರಾಜು ಆಗುವವರೆಗೂ ನಿರ್ದಿಷ್ಟಪಡಿಸಿದ ಕಲಿಕಾ ಫಲಗಳ ಯಶಸ್ವಿಗಾಗಿ ಈಗಾಗಲೇ ಸೂಚಿಸಿರುವ FLN ಚಟುವಟಿಕೆಗಳನ್ನು ಕಡ್ಡಾಯವಾಗಿ ನಡೆಸಲು ಪರ್ಯಾಯ ಮಾರ್ಗೋಪಾಯಗಳನ್ನು ಬಳಸಬೇಕಾಗುತ್ತದೆ.
*BEO/BRCC ಸೇಡಂ*
No comments:
Post a Comment