Tuesday, 21 June 2022

ಅಂತರಾಷ್ಟ್ರೀಯ ಯೋಗ ದಿನ

🌷 ಎಲ್ಲರಿಗೂ ಅಂತರರಾಷ್ಟ್ರೀಯ ಯೋಗ ದಿನಾಚಾರಣೆಯ ಶುಭಾಶಯಗಳು ಪ್ರತಿಯೊಬ್ಬ ವ್ಯಕ್ತಿಯೂ ದೈಹಿಕವಾಗಿ ಸದೃಢ ಹಾಗು ಮಾನಸಿಕವಾಗಿ ಚೈತನ್ಯ ಪೂರ್ಣವಾಗಿರಲು ಯೋಗ ಒಂದು ದಿವ್ಯ ಔಷಧ. ಶರೀರ ಮತ್ತು ಮನಸ್ಸಿನ ಸಂಪೂರ್ಣ ಶಕ್ತಿಯನ್ನು ಜಾಗೃತಗೊಳಿಸುವ ಸಾಧನೆಯೇ ಯೋಗ. ಈ ಯೋಗದಲ್ಲಿ ಆಸನ-ವ್ಯಾಯಾಮ-ಪ್ರಾಣಾಯಮ-ಧ್ಯಾನ ಕ್ರೀಯಗಳು ಬಹುಮುಖ್ಯವಾಗಿವೆ ಪ್ರತಿದಿನ ತಪ್ಪದೆ ಈ ಕ್ರಿಯೆಗಳನ್ನು ಅಳವಡಿಸಿಕೊಂಡರೆ ನಮ್ಮ ದೇಹ ಮನಸ್ಸು ಸದಾ ಚೇತೋಹಾರಿಯಾಗಿರುತ್ತದೆ ಭಾರತದಲ್ಲಿ ಈ ಯೋಗಾಭ್ಯಾಸಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಯೋಗ ಪಿತಾಮಹ ಪತಂಜಲಿ ಅವರ ಯೋಗ ದರ್ಶನದ ಪ್ರಕಾರ ಯೋಗವು ವೈಜ್ಞಾನಿಕ ಚಿಕಿತ್ಸಾ ಪದ್ದತಿ,ಆರೋಗ್ಯ ವಂತರಿಗೆ ಜೀವನ ಪದ್ದತಿ ಸಾಧಕರಿಗೆ ಸಾಧನಾ ಪದ್ದತಿ ಯಾಗಿದೆ. ಅಲ್ಲದೆ ಮಾನವನ ಎಲ್ಲಾ ಸಮಸ್ಯೆಗಳಿಗೆ ಸರ್ವಶ್ರೇಷ್ಠ ಪರಿಹಾರವಾಗಿದೆ. 💐

ಸತತ ಪ್ರಯತ್ನವೇ ಸಾಧನೆಯ ರಹಸ್ಯ ಎನ್ನುವ ಹಾಗೆ ಪ್ರತಿನಿತ್ಯ ಯೋಗ ಮಾಡಿ ರೋಗದಿಂದ ದೂರವಿರಿ.

ನಮ್ಮ ಸೇಡಂ ತಾಲೂಕಿನ ಎಲ್ಲಾ ಶಾಲೆಯ ಮುಖ್ಯಗುರುಗಳಿಗೆ, ಸಹ ಶಿಕ್ಷಕರಿಗೆ, ದೈಹಿಕ ಶಿಕ್ಷಕರಿಗೆ ಹಾಗೂ ಇತರೆ ಎಲ್ಲಾ ರೀತಿಯಿಂದಲೂ ಯೋಗ ಮಾಡಲು ಪ್ರೇರೇಪಿಸಿದ ಸಿಬ್ಬಂದಿ ವರ್ಗದವರಿಗೆ ನಮ್ಮ ತಾಲೂಕಿನ ಅಧಿಕಾರಿ ವೃಂದದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ.

ಮಕ್ಕಳು ತುಂಬಾ ಖುಷಿಯಿಂದ ಭಾಗವಹಿಸುತ್ತಿದ್ದಾರೆ ಅದ್ಬುತವಾಗಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಗೌರವಾನ್ವಿತ ಸುಗಮಕಾರರಿಗೆ ಅಭಿನಂದನೆಗಳು.
 ತಮ್ಮ ಹಾಗೂ ಮಕ್ಕಳ ಉತ್ಸಾಹ,ತೊಡಗಿಸಿಕೊಳ್ಳುವಿಕೆ ಹೀಗೆ ಮುಂದುವರಿಯಲಿ.
💐💐🙏🙏🙏

2 comments:

ಧರ್ಮಪಾಲ ಎನ್ said...

We’ve never seen your cape or mask, but we see your superpowers every day!
Thanks for being a super teacher!

Ghpskadalapur said...

ಪ್ರತಿ ಶಾಲೆಯಲ್ಲಿ ಯೋಗ ದಿನಾಚರಣೆಯ ತುಂಬಾ ಉತ್ತಮವಾಗಿ ಆಚರಣೆ ಮಾಡಿದ್ದಕ್ಕಾಗಿ ಭಾಗವಹಿಸಿದ ಸರ್ವರಿಗೂ ಅಭಿನಂದನೆಗಳು.

DIRECT ADDMISSION IN MHRD UDISE+

NEW UPDATE IN MHRD UDISE+                       ಆತ್ಮೀಯ ಸೇಡಂ ತಾಲೂಕಿನ ಮುಖ್ಯಗುರುಗಳಿಗೆ ಈ ಮೂಲಕ ತಿಳಿಸುವುದೇನೆಂದರೆ MHRD UDISE+ ನ STUDENT MODULE ನಲ್ಲ...